EAST-WEST
ಪೂರ್ವ-ಪಶ್ಚಿಮ
ಸೂರ್ಯ ತಿರುಗುತ್ತಿಲ್ಲ; ಇದ್ದಲ್ಲೇ ಇದ್ದಾನೆ.
ಅವನಿಗೆಲ್ಲಿದೆ ಪೂರ್ವ-ಪಶ್ಚಿಮ
ಭೂಮಿ ತಿರುಗುತ್ತಿದೆ; ಕಾಣುತ್ತಿದೆ
ದಿನವೂ ಪೂರ್ವ-ಪಶ್ಚಿಮ.
ಮನುಷ್ಯ ಭೂಮಿಯನ್ನು ಮೀರಿಸಿದ್ದಾನೆ
ಆ ಭೂಮಿ ಮೇಲೇ ತಿರುಗಾಡತ್ತಾನೆ
ಅವನಿಗೆಲ್ಲಿದೇ ಗೆರೆ ಹಾಕಿದ ಅಕ್ಷಾಂಶ ರೇಖಾಂಶಗಳು
ಅವನಿಗೆ ಅವನದೇ ಎರಡು ಅಕ್ಷ-ಕಕ್ಷೆಗಳು..?!
ಮನುಷ್ಯ ಪೂರ್ವಕ್ಕೆ ತಿರುಗಿ ನಿಶ್ಚಲನಾಗಿ ನಿಂತರೆ ಪೂರ್ವಾಗ್ರಹ ಪೀಡಿತನೇ
ಪಶ್ಚಿಮಕ್ಕೆ ತಿರುಗಿರುವೆ ನಾ ಅಚಲನೆಂದರೆ ಅಪರಿಗ್ರಹ ಪೀಡಿತನೇ
ಹೌದು, ತಿರುಗಿ ನೋಡುವುದರಿಂದ ಹೊರಗೆ
ಪೂರ್ವ- ಪಶ್ಚಿಮಗಳಿವೆ ಎಂಬ ಬೆಳಕು-ಕತ್ತಲೆ ಇದೆ ಎಂಬ ಅನುಭವ.
ಎತ್ತೆತ್ತಲೂ ತಿರುಗಿ ನೋಡುವುದರಿಂದಲೆ ತನ್ನೊಳಗೇ
ತಾನು ಪುರೋಗಾಮಿಯೋ ತಿರೋಗಾಮಿಯೋ
ಎಂಬ ತಾಕಲಾಟದಲಿ ಕಾಲದೊಡಲಲಿ ಇಡುವ ಹೆಜ್ಚೆಗಳಲಿ ಭಯವೆ…
ಹೌದು, ಸೂರ್ಯ ಇದ್ದಲ್ಲೇ ಉರಿದು ಜಗಕೆ ಬೆಳಕು ನೀಡುತ್ತಾನೆ
ಭೂಮಿ ತನ್ನ ಅಕ್ಷದ ಮೇಲೇತಿರುಗುತ್ತಾ ಹಗಲು-ಬೆಳಕು ಕಾಣುತ್ತದೆ
ತನ್ನ ಕಕ್ಷೆಯ ಮೇಲೇ ಸಾಗಿ ಋತು-ಮಾನಗಳಿಗೆ ಕಾರಣವಾಗುತ್ತದೆ.
ಭೂಮಿಗಿದೆ ನೋಡಿ ಒಂದು ಶಿಷ್ಟತೆ
ಸೂರ್ಯನಿಗೋ ಒಂದು ಗಟ್ಟಿ ಸ್ಥಿರತೆ
ಮನುಷ್ಯನಿಗೆ ಎಲ್ಲವೂ ಅಸ್ಥಿರತೆ…
-ರೈಟರ್ ಶಿವರಾಂ
Click here for My Kannada Blogs http://youthtimes.blogspot.com/
