ಪೂರ್ವ-ಪಶ್ಚಿಮಸೂರ್ಯ ತಿರುಗುತ್ತಿಲ್ಲ; ಇದ್ದಲ್ಲೇ ಇದ್ದಾನೆ. ಅವನಿಗೆಲ್ಲಿದೆ ಪೂರ್ವ-ಪಶ್ಚಿಮ ಭೂಮಿ ತಿರುಗುತ್ತಿದೆ; ಕಾಣುತ್ತಿದೆ ದಿನವೂ ಪೂರ್ವ-ಪಶ್ಚಿಮ. ಮನುಷ್ಯ ಭೂಮಿಯನ್ನು ಮೀರಿಸಿದ್ದಾನೆ ಆ ಭೂಮಿ ಮೇಲೇ ತಿರುಗಾಡತ್ತಾನೆ ಅವನಿಗೆಲ್ಲಿದೇ ಗೆರೆ ಹಾಕಿದ ಅಕ್ಷಾಂಶ ರೇಖಾಂಶಗಳು ಅವನಿಗೆ ಅವನದೇ ಎರಡು ಅಕ್ಷ-ಕಕ್ಷೆಗಳು..?!ಮನುಷ್ಯ ಪೂರ್ವಕ್ಕೆ ತಿರುಗಿ ನಿಶ್ಚಲನಾಗಿ ನಿಂತರೆ ಪೂರ್ವಾಗ್ರಹ ಪೀಡಿತನೇ ಪಶ್ಚಿಮಕ್ಕೆ ತಿರುಗಿರುವೆ ನಾ ಅಚಲನೆಂದರೆ ಅಪರಿಗ್ರಹ ಪೀಡಿತನೇ ಹೌದು, ತಿರುಗಿ ನೋಡುವುದರಿಂದ ಹೊರಗೆ ಪೂರ್ವ- ಪಶ್ಚಿಮಗಳಿವೆ ಎಂಬ ಬೆಳಕು-ಕತ್ತಲೆ ಇದೆ ಎಂಬ ಅನುಭವ.ಎತ್ತೆತ್ತಲೂ ತಿರುಗಿ ನೋಡುವುದರಿಂದಲೆ ತನ್ನೊಳಗೇ ತಾನು ಪುರೋಗಾಮಿಯೋ ತಿರೋಗಾಮಿಯೋ [...]
